Tuesday, March 10, 2009

Capscicum Chicken Masala

ಕೋಳಿ ದಪ್ಪ ಮೆಣಸಿನಕಾಯಿ ಡ್ರೈ ಮಸಾಲಾ:

ಬೇಕಾಗುವ ಸಾಮಗ್ರಿಗಳು:


ಈರುಳ್ಳಿ - ಸಣ್ಣಗೆ ಹೆಚ್ಚಿದ್ದು
ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ - 1 ಚಮಚ
ಚಿಕನ್ ಪೀಸಸ್
ಟೋಮೋಟೋ ಪ್ಯೂರಿ
ಗೋಡಂಬಿ ಪೇಸ್ಟ್ ಸ್ವಲ್ಪ
ದಪ್ಪ ಮೆಣಸಿನಕಾಯಿ ಹೋಳುಗಳು ಸ್ವಲ್ಪ
ಧನಿಯಾಪುಡಿ - 2 ಚಮಚ
ಅಚ್ಚಕಾರದ ಪುಡಿ
ಗರಂ ಮಸಾಲ - 1 ಚಮಚ
ಕೊತ್ತುಂಬರಿ ಸೊಪ್ಪು ಹೆಚ್ಚಿದ್ದು
ಉಪ್ಪು
ಎಣ್ಣೆ - 2ಚಮಚ

ತಯಾರಿಸುವ ರೀತಿ:

ಮೊದಲು ತವಾ ಬಿಸಿ ಮಾಡಿ, ಅದಕ್ಕೆ ಎಣ್ಣೆ ಹಾಕಿ, ಕಾದ ಮೇಲೆ ಈರುಳ್ಳಿ ಹಾಕಿ ಬಾಡಿಸಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ, ಒಂದೆರಡು ನಿಮಿಷ ಹುರಿದು, ಧನಿಯಾಪುಡಿ,ಗರಂಮಸಾಲಾ ಮತ್ತು ಟಮೋಟ ಫ್ಯೂರಿ ಹಾಕಿ ಬಾಡಿಸಿ,ಕೋಳಿ ತುಂಡುಗಳನ್ನು ಹಾಕಿ ಐದಾರು ನಿಮಿಷ ಚೆನ್ನಾಗಿ ಬಾಡಿಸಿ ಮತ್ತು ಗೋಡಂಬಿ ಪೇಸ್ಟ್,ದಪ್ಪ ಮೆಣಸಿನಕಾಯಿ ಹಾಕಿ ಒಂದೆರಡು ನಿಮಿಷ ಹುರಿದು ನಂತರ ಅಚ್ಚಮೆಣಸಿನಪುಡಿ,ಉಪ್ಪು, ಕೊತ್ತುಂಬರಿ ಸೊಪ್ಪು ಸ್ವಲ್ಪ ಹಾಕಿ ಎಲ್ಲವನ್ನು ಚೆನ್ನಾಗಿ ಬೆರೆಸಿ. ಅರ್ಧ ಲೋಟ ನೀರು ಹಾಕಿ ಬೇಯಲು ಬಿಡಿ. ಕೋಳಿ ಬೆಂದು ಅದರ ನೀರು ಎಲ್ಲಾ ಡ್ರೈ ಆದ ಮೇಲೆ ಮತ್ತೆ ಸ್ವಲ್ಪ ಕೊತ್ತುಂಬರಿ ಸೊಪ್ಪು ಹಾಕಿ,ಚೆನ್ನಾಗಿ ಬೆರೆಸಿ. ಇದನ್ನು ಚಪಾತಿ,ಪೂರಿ,ಪರೋಟ ಅಥವಾ ಊಟಕ್ಕೆ ನೆಂಚಿಕೊಳ್ಳಲು ನೀಡಬಹುದು.

* ಕೋಳಿ ಬೇಯುವಷ್ಟು ಮಾತ್ರ ನೀರು ಹಾಕಿ.
* ಉಪ್ಪು ಮತ್ತು ಕಾರ ನಿಮ್ಮ ರುಚಿಗೆ ತಕ್ಕಂತೆ ಬೆರೆಸಿಕೊಳ್ಳಿ.

0 comments:

Non Veg Recipes Headline Animator