Thursday, October 11, 2007

Mutton Aloo Masala

ಮಟನ್ ಆಲೂ ಮಸಾಲ:

ಬೇಕಾಗುವ ಸಾಮಾಗ್ರಿಗಳು:

ಮಟನ್ - 1/2 ಕೆಜಿ
ಈರುಳ್ಳಿ 1 ಮದ್ಯಮಗಾತ್ರ - ಸಣ್ಣಗೆ ಹೆಚ್ಚಿದ್ದು
ಹಸಿಮೆಣಸಿನಕಾಯಿ 2 - ಹೆಚ್ಚಿದ್ದು
ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್- 2 ಚಮಚ
ಟಮೋಟೋ ರಸ (ಪೇಸ್ಟ್ ಅಥವ ಪ್ಯೂರಿ) 2 ದೊಡ್ಡ ಚಮಚ
ಗರಂ ಮಸಾಲ 1/2 ಚಮಚ
ಆಲೂಗೆಡ್ಡೆ 1 ದೊಡ್ಡದು - ಹೆಚ್ಚಿಕೊಳ್ಳಿ
ಅಚ್ಚ ಖಾರದ ಪುಡಿ ಕಾರಕ್ಕೆ ಬೇಕಾದಷ್ಟು
ಕೊತ್ತುಂಬರಿ ಸೊಪ್ಪು ಹೆಚ್ಚಿದ್ದು ಸ್ವಲ್ಪ
ಪುದೀನ ಹೆಚ್ಚಿದ್ದು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು.
ಎಣ್ಣೆ ಅವಶ್ಯಕತೆ ಇದ್ದಷ್ಟು.


ಮಾಡುವ ವಿಧಾನ:

ಮೊದಲು ಬಾಣಲೆ ಅಥವ ಕುಕ್ಕರ್ ಅಥವ ಪಾತ್ರೆಗೆ ಎಣ್ಣೆ ಹಾಕಿ, ಕಾದ ನಂತರ ಈರುಳ್ಳಿ ಹಾಕಿ, ಬಾಡಿಸಿದ ಮೇಲೆ, ಅರಿಶಿನ, ಚಿಟಿಕೆ ಉಪ್ಪು ಹಾಕಿ, ಈರುಳ್ಳಿ ಬೆಂದ ಮೇಲೆ ಶುಂಠಿ - ಬೆಳ್ಳುಳ್ಳಿ ಪೇಸ್ಟ್ ಹಾಕಿ, ಟಮೋಟೋ ಪ್ಯೂರಿ ಹಾಕಿ ಅದು ಹಸಿವಾಸನೆ ಹೋದ ಮೇಲೆ, ಗರಂ ಮಸಾಲ, ಖಾರದ ಪುಡಿ, ಹಸಿಮೆಣಸಿನಕಾಯಿ ಪೀಸಸ್ ಹಾಕಿ, ಕೊತ್ತುಂಬರಿ ಮತ್ತು ಪುದೀನ ಹಾಕಿ ಬೆರೆಸಿ, ಮಟನ್ ಹಾಕಿ, ಹಾಗೆ 2-3 ನಿಮಿಷ ಚೆನ್ನಾಗಿ ತಿರುವಿ. ನೀರು ಎಷ್ಟು ಬೇಕೋ ಅಷ್ಟು ಹಾಕಿ, 20 ರಿಂದ 25 ನಿಮಿಷ ಬೇಯಿಸಿ ಅಥವಾ ಮಟನ್ ಬೇಯುವವರೆಗು ಬೇಯಿಸಿ.ಕೆಲವೊಂದು ಮಟನ್ ಬೇಗ ಬೇಯುವುದಿಲ್ಲ, ನೋಡಿಕೊಂಡು ಬೇಯಿಸಿ, ನಂತರ ಮುಚ್ಚುಳ ತೆಗೆದು ಆಲೂಗೆಡ್ಡೆ ಹೋಳುಗಳನ್ನು ಹಾಕಿ. ಆಲೂ ಬೇಯುವವರೆಗೂ ಮಾತ್ರ ಬೇಯಿಸಿ. ಕೊತ್ತುಂಬರಿ ಮತ್ತು ಪುದೀನ ಸೊಪ್ಪುನ್ನು ಹಾಕಿ, ಬೆರೆಸಿ. ಸರ್ವಿ೦ಗ್ ಪಾತ್ರೆಗೆ ಹಾಕಿ, ಮೇಲೆ ಮತ್ತೆ ಕೊತ್ತು೦ಬರಿ ಮತ್ತು ಪುದೀನಯಿಂದ ಅಲಂಕರಿಸಿ. ಆಲೂ - ಮಟನ್ ಮಸಾಲ ಅಥವ ಸಾರು ತಯಾರು.

Non Veg Recipes Headline Animator