Saturday, January 24, 2009

Chicken Chops

ಚಿಕನ್ ಚಾಪ್ಸ್:

ಬೇಕಾಗುವ ಸಾಮಾಗ್ರಿಗಳು:


ಕೋಳಿ - ಕಟ್ ಮಾಡಿ,ತುಂಡು ಮಾಡಿಕೊಳ್ಳಿ
ಬೆಳ್ಳುಳ್ಳಿ ಒಂದು ಹಿಡಿ ಸಿಪ್ಪೆ ತೆಗೆದು ಬಿಡಿಸಿದ್ದು,
ಶುಂಠಿ ಪೇಸ್ಟ್ ಒಂದು ದೊಡ್ಡ ಚಮಚ
ಅಚ್ಚಖಾರದ ಪುಡಿ
ಹಳದಿ ಪುಡಿ (ಅರಶಿಣ)
ಗರಂ ಮಸಾಲ
ಉಪ್ಪು
ಎಣ್ಣೆ

ತಯಾರಿಸುವ ವಿಧಾನ:


ಕೋಳಿ ತುಂಡುಗಳನ್ನು ಸ್ವಲ್ಪ ಉಪ್ಪು ಮತ್ತು ನೀರು ಹಾಕಿ ಬೇಯಿಸಿಕೊಳ್ಳಿ.
ಪಾತ್ರೆಗೆ ಎಣ್ಣೆ ಹಾಕಿ, ಕಾದ ಬಳಿಕ ಅದಕ್ಕೆ ಬೆಳ್ಳುಳ್ಳಿ, ಶುಂಠಿ, ಅರಶಿಣದ ಪುಡಿ, ಅಚ್ಚಖಾರದ ಪುಡಿ, ಉಪ್ಪು ಮತ್ತು ಗರಂ ಮಸಾಲಾ ಹಾಕಬೇಕು. ನಂತರ ಬೇಯಿಸಿದ ಚಿಕನ್ ತುಂಡುಗಳನ್ನು ಹಾಕಿ ಚೆನ್ನಾಗಿ ಬೆರೆಸಿ, ನೀರು ಪೂರ್ತಿ ಡ್ರೈ ಆಗುವವರೆಗೂ ಬೇಯಿಸಬೇಕು,ನೀರಿನ ಅಂಶ ಸ್ವಲ್ಪವು ಇರಬಾರದು. ಉಪ್ಪು ಮತ್ತು ಖಾರ ನಿಮ್ಮ ರುಚಿಗೆ ತಕ್ಕಂತೆ ಸೇರಿಸಿಕೊಳ್ಳಿ. ಎಣ್ಣೆ ಸ್ವಲ್ಪ ಜಾಸ್ತಿ ಹಾಕಬೇಕು, ಮಸಾಲೆ ಚಿಕನ್ ಪೀಸಸ್ ಗಳಿಗೆ ಚೆನ್ನಾಗಿ ಹಿಡಿಯುವಂತೆ ಬೆರೆಸಿ. ಚಿಕನ್ ಚಾಪ್ಸ್ ತಿನ್ನಲು ರೆಡಿ. ಊಟಕ್ಕೆ ನೆಂಚಿಕೊಳ್ಳಬಹುದು ಅಥವ ಚಪಾತಿಗೂ ನೆಂಚಿಕೊಳ್ಳಬಹುದು. ಇದನ್ನು ಎರಡು - ಮೂರು ದಿನ ಹಾಗೆ ಇಟ್ಟು ತಿನ್ನಬಹುದು. ತಂಗಳ ಪೆಟ್ಟಿಗೆಯಲ್ಲಿ ಸುಮಾರು ದಿನ ಇರುತ್ತದೆ.

0 comments:

Non Veg Recipes Headline Animator