Friday, September 21, 2007

Chicken Chilli Palav/Pulao

ಕೋಳಿ ಚಿಲ್ಲಿ ಪಲಾವ್ :


ಬೇಕಾಗುವ ಸಾಮಾಗ್ರಿಗಳು:

ಕೋಳಿ - ಅರ್ಧ ಕೆಜಿ
ಬಾಸುಮತಿ ಅಕ್ಕಿ - 2 ಕಪ್ಸ್
ಈರುಳ್ಳಿ - ಒಂದು ದೊಡ್ಡದು, ಹೆಚ್ಚಿಕೊಳ್ಳಿ
ಶುಂಠಿ, ಬೆಳ್ಳುಳ್ಳಿ ಪೇಸ್ಟ್ - ಎರಡು ಚಮಚ
ಟಮೋಟೋ - ಒಂದು ಹೆಚ್ಚಿದ್ದು
ಹಸಿಮೆಣಸಿನಕಾಯಿ 5-6 ರುಚಿಗೆ ತಕ್ಕಷ್ಟು, ಹೆಚ್ಚಿದ್ದು
ಒಣದ್ರಾಕ್ಷಿ - 1 ಚಮಚ
ಕೊತ್ತುಂಬರಿ ಸೊಪ್ಪು ಸ್ವಲ್ಪ
ಪುದೀನ ಸ್ವಲ್ಪ
ನಿಂಬೆರಸ 1 ಚಮಚ
ಚೆಕ್ಕೆ, ಲವಂಗ,ಏಲಕ್ಕಿ,ಪಲಾವ್ ಪತ್ರೆ
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ ಬೇಕಾಗುವಷ್ಟು.


ತಯಾರಿಸುವ ವಿಧಾನ:

ಮೊದಲು ಪಾತ್ರೆ ಅಥವಾ ಕುಕ್ಕರ್ ನಲ್ಲಿ ಎಣ್ಣೆ ಹಾಕಿ, ಕಾದ ಮೇಲೆ ಈರುಳ್ಳಿ ಹಾಕಿ,ಹುರಿದು ಕೋಳಿ ಪೀಸಸ್ ಹಾಕಿ ಚೆನ್ನಾಗಿ ತಿರುವಿ, ಅದು ಬಿಳಿ ಬಣ್ಣ ಬಂದ ನಂತರ ಟಮೋಟೊ , ಹಸಿಮೆಣಸಿನಕಾಯಿ ಹಾಕಿ ಅದು ಬಾಡಿಸಿದ ಮೇಲೆ, ಚೆಕ್ಕೆ,ಲವಂಗ,ಏಲಕ್ಕಿ, ಪತ್ರೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ, ಕೊತ್ತುಂಬರಿ ಮತ್ತು ಪುದೀನ ಸೊಪ್ಪು ಸ್ವಲ್ಪ ಹಾಕಿ,ಒಣದ್ರಾಕ್ಷಿ,ಉಪ್ಪು, ಅಳತೆಗೆ ತಕ್ಕಷ್ಟು ನೀರು ಹಾಕಿ,ಕುದಿಸಿ. ಕುದಿ ಬಂದ ನಂತರ ನಿಂಬೆರಸ ಮತ್ತು ನೆನೆಸಿಟ್ಟ ಅಕ್ಕಿಯನ್ನು ಹಾಕಿ, ಮತ್ತೆ ಸ್ವಲ್ಪ ಕೊತ್ತುಂಬರಿ ,ಪುದೀನ ಹಾಕಿ ಮುಚ್ಚಿಟ್ಟು ಬೇಯಿಸಿ. ಕುಕ್ ಆದ ಮೇಲೆ ಇಳಿಸಿ, ಅಲಂಕಾರಕ್ಕೆ ಕೊತ್ತುಂಬರಿ ಮತ್ತು ಪುದೀನ ಹಾಕಿ, ಬೆರೆಸಿ, ರುಚಿಯಾದ ಬಿರಿಯಾನಿ ರೆಡಿ.

ಇದನ್ನು ರಾಯಿತ ಮತ್ತು ಸಲಾಡ್ ಜೊತೆ ಸವಿಯಲು ನೀಡಿ. ಜೊತೆಯಲ್ಲಿ ಚಿಕನ್ ಕುರ್ಮಾ ಕೂಡ ಒಳ್ಳೆಯ ಕಾಂಬಿನೇಷನ್.

ಇನ್ನೂ ರಿಚ್ ಬೇಕಾದರೆ ತುಪ್ಪದಲ್ಲಿ ಕರಿದ ಗೋಡಂಬಿ ಮತ್ತು ಈರುಳ್ಳಿ ಪೀಸಸ್ ಗಳಿಂದ ಅಲಂಕರಿಸಿ, ತಿನ್ನಲು ನೀಡಿ.

Non Veg Recipes Headline Animator